ಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಆಯಾಲೋಹದ ಲವಣ ಮತ್ತು ಹೈಡ್ರೋಜನ್ ಅನಿಲವನ್ನು ಉಂಟುಮಾಡುತ್ತದೆ.
ಅಲೋಹಗಳು ಆಮ್ಲಗಳೊಂದಿಗೆ ವರ್ತಿಸಿ ಆಯಾಲೋಹದ ಲವಣ ಮತ್ತು ಹೈಡ್ರೋಜನ್ ಗಳನ್ನು ಉತ್ಪತ್ತಿ ಮಾಡುತ್ತದೆ.
ಸಸ್ಯಗಳಲ್ಲಿ ಮೆಗ್ನೀಷಿಯಂ ಕಂಡುಬರುತ್ತದೆ ಎಂದು ಕೇಳಿದ್ದೇನೆ.ಅದು ಅವುಗಳಲ್ಲಿ ಯಾವ ರೂಪದಲ್ಲಿ ಕಂಡು ಬರುತ್ತದೆ?
ಸಸ್ಯಗಳಲ್ಲಿ ಮೆಗ್ನೀಷಿಯಂ ಪತ್ರಹರಿತಿನಲ್ಲಿದ್ದು ಡೈವ್ಯಾಲೆಂಟ್ ರೂಪದಲ್ಲಿರುತ್ತದೆ. ವೈದ್ಯರು ನನಗೆ ಕಬ್ಬಿಣಾಂಶದ ಕೊರತೆ ಇದೆ ಎಂದು ಹೇಳಿದ್ದಾರೆ.ನನ್ನ ದೇಹದಲ್ಲಿ ಕಬ್ಬಿಣ ಎಲ್ಲಿದೆ?ನಮ್ಮ ದೇಹದಲ್ಲಿ ಕಬ್ಬಿಣಾಂಶವು ರಕ್ತದ ಕೆಂಪು ರಕ್ತ ಕಣಗಳಲ್ಲಿನ ಹಿಮೋಗ್ಲೋಬಿನ್ ನಲ್ಲಿದೆ ಮತ್ತು ಸ್ನಾಯುಕೋಶಗಳಲ್ಲಿನ ಮೈಯೋಗ್ಲೋಬಿನ್ ನಲಿದೆ.
ಚಟುವಟಿಕೆ 3:ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾದ ಪ್ರಯೋಗವನ್ನು ಕೈಗೊಂಡು ತೀರ್ಮಾನವನ್ನು ವ್ಯಕ್ತಪಡಿಸಿ.
; 100 ಎಂಎಲ್ 5 ಬೀಕರ್ಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳ ಮೇಲೆ ಎ ಬಿ ಸಿ ಡಿ ಮತ್ತು ಇ ಗಳೆಂದು ನಮೂದಿಸಿ.ಪ್ರತಿ ಭೀಕರ ನಲ್ಲಿ 50 ಎಮ್ಎಲ್ ನಷ್ಟು ನೀರನ್ನು ತೆಗೆದುಕೊಳ್ಳಿ.ಪ್ರತಿಯೊಂದು ಭೀಕರ ನಲ್ಲೂ ಕೊಟ್ಟಿರುವ ಪ್ರತಿಯೊಂದು ವಸ್ತುವನ್ನು ಒಂದು ಚಮಚೆಯಷ್ಟು ಅನುಕ್ರಮವಾಗಿ ವಿಲೀನಗೊಳಿಸಿ. ತೀರ್ಮಾನ:ಹೆಚ್ಚು ಕ್ರಿಯಾಶೀಲ ಲೋಹಗಳು ಕಡಿಮೆ ಕ್ರಿಯಾಶೀಲ ಲೋಹಗಳನ್ನು ಸ್ಥಳಾಂತರಿಸುತ್ತವೆ.ಆದರೆ ಕಡಿಮೆ ಕ್ರಿಯಾಶೀಲ ಲೋಹಗಳು ಹೆಚ್ಚು ಕ್ರಿಯಾಶೀಲ ಲೋಹಗಳನ್ನು ಸ್ಥಳಾಂತರಿಸಲಾರವು.
ನನ್ನ ತಿಳುವಳಿಕೆಯನ್ನು ನಾನೇ ಪರಿಶೀಲಿಸಿಕೊಳ್ಳುವೆ.
1.ಸೋಡಿಯಂ ಮತ್ತು ಪೊಟ್ಯಾಶಿಯಂ ಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.ಏಕೆ?ಸೋಡಿಯಂ ಮತ್ತು ಪೊಟ್ಯಾಶಿಯಂ ಗಳು ಕ್ರಿಯಾಶೀಲ ಧಾತುಗಳಾಗಿದ್ದು ಗಾಳಿಯಲ್ಲಿರುವ ಆಕ್ಸಿಜನ್ ನೊಂದಿಗೆ ಪ್ರತಿಕ್ರೀಯಿಸುತ್ತವೆ.ಆದ್ದರಿಂದ ಸೋಡಿಯಂ ಮತ್ತು ಪೊಟ್ಯಾಶಿಯಂ ಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ
2.ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಂಗ್ರಹಿಸಿಡಬಹುದೇ?ವಿವರಿಸಿ.ನಿಂಬೆ ಉಪ್ಪಿನಕಾಯಿಯನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಇರಿಸಿದರೆ, ಸಿಟ್ರಿಕ್ ಆಮ್ಲವು ಅಲ್ಯೂಮಿನಿಯಂನೊಂದಿಗೆ ಪ್ರತಿಕ್ರಿಯಿಸಿ ಉಪ್ಪನ್ನು ರೂಪಿಸುತ್ತದೆ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹೈಡ್ರೋಜನ್ ಬಿಡುಗಡೆಯು ಉಪ್ಪಿನಕಾಯಿಯನ್ನು ಹಾಳುಮಾಡುತ್ತದೆ ಮತ್ತು ಅದು ಇನ್ನು ಮುಂದೆ ತಿನ್ನಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದ, ಅಲ್ಯೂಮಿನಿಯಂ ಪಾತ್ರೆಯಲ್ಲಿ ನಿಂಬೆ ಉಪ್ಪಿನಕಾಯಿಯನ್ನು ಸಂಗ್ರಹಿಸದಿರುವುದು ಒಳ್ಳೆಯದು.
ಲೋಹದ ಯಾವ ಗುಣವೂ ಚಾಕ್ಲೆಟ್ ಹಾಳೆಯ ಬಳಕೆಗೆ ಯೋಗ್ಯವಾಗಿದೆ?ಲೋಹವು ಕಠಿಣವಾಗಿದ್ದು,ಗಾಳಿ ಬೆಳಕು ಮತ್ತು ತೇವಾಂಶದಿಂದ ಚಾಕಲೇಟ್ ಗೆ ರಕ್ಷಣೆಯನ್ನು ಒದಗಿಸುತ್ತದೆ.
4.ಈ ಕೆಳಗಿನ ಅಲೋಹ ಹಾಗೂ ಅವುಗಳ ಬಳಕೆಯನ್ನು ಹೊಂದಿಸಿ ಬರೆಯಿರಿ. ಯಾವ ಅಲೋಹವು ಗಾಳಿಯೊಂದಿಗೆ ವರ್ತಿಸಿ ಬೆಂಕಿ ಉತ್ಪತ್ತಿ ಮಾಡುತ್ತದೆ?