ಸೋಮವಾರ, ಡಿಸೆಂಬರ್ 2, 2013

ಭಾಜ್ಯತೆಯ ನಿಯಮಗಳು

ಭಾಜ್ಯತೆಯ ನಿಯಮಗಳೆಂದರೆ  ನೈಜ ಭಾಗಾಕಾರ ಮಾಡ್ದೇನೆ ದತ್ತ ಸಂಖ್ಯೆಯು ಯಾವ ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆ ಎಂಬುದನ್ನು ಕಂಡು ಹಿಡಿಯಲು ನಮಗಿರುವ ಸೂಚನೆಗಳೇ ಭಾಜ್ಯತೆಯ ನಿಯಮಗಳು .
2 ರ ಭಾಜ್ಯತೆಯ ನಿಯಮ;
                                    ಎಲ್ಲಾ ಸಮ ಸಂಖ್ಯೆಗಳು 2ರಿಂದ ಪೂರ್ಣವಾಗಿ ಭಾಗವಾಗುತ್ತವೆ. ಉದಾ;1376,252,1354,25978,135790 ಇತ್ಯಾದಿ.

3ರ ಭಾಜ್ಯತೆಯ ನಿಯಮ;
                                   ದತ್ತ ಸಂಖ್ಯೆಯ ಎಲ್ಲಾ ಅಂಕಿಗಳ ಮೊತ್ತವು 3 ರಿಂದ ಭಾಗವಾದರೆ ಆ ಸಂಖ್ಯೆಯು 3 ರಿಂದ ಭಾಗವಾಗುತ್ತದೆ. ಉದಾ;1245----->1+2+4+5=12 ವು 3ರಿಂದ ಭಾಗವಾಗುತ್ತದೆ.ಆದ್ದರಿಂದ 1245 ಕೂಡ 3 ರಿಂದ ಭಾಗವಾಗುತ್ತದೆ.

4ರ ಭಾಜ್ಯತೆಯ ನಿಯಮ;
                                   ದತ್ತ ಸಂಖ್ಯೆಯ ಕೊನೆಯ ಎರಡು ಅಂಕಿಗಳಿಂದಾದ ಸಂಖ್ಯೆಯು 4ರಿಂದ ಭಾಗವಾದರೆ ಆ ಇಡೀ ಸಂಖ್ಯೆಯು 4ರಿಂದ ಭಾಗವಾಗುತ್ತದೆ.
ಉದಾ;731512 ಇಲ್ಲಿ ಕೊನೆಯ ಎರಡು ಅಂಕಿಗಳು 12 ವು 4ರಿಂದ ಭಾಗವಾಗುತ್ತದೆ.ಆದ್ದರಿಂದ 731512 ಕೂಡ 4ರಿಂದ ಭಾಗವಾಗುತ್ತದೆ.

5ರ ಭಾಜ್ಯತೆಯ ನಿಯಮ:
                                   ದತ್ತ ಸಂಖ್ಯೆಯ ಕೊನೆಯ ಅಂಕಿಯು 0 ಅಥವಾ 5 ಆದರೆ ಆ ಸಂಖ್ಯೆಯು 5ರಿಂದ ಪೂರ್ಣವಾಗಿ ಭಾಗವಾಗುತ್ತದೆ.

6ರ ಭಾಜ್ಯತೆಯ ನಿಯಮ;
                                   3ರಿಂದ ಭಾಗವಾಗುವ ಎಲ್ಲಾ ಸಮ ಸಂಖ್ಯೆಗಳು 6ರಿಂದ ಭಾಗವಾಗುತ್ತದೆ. ಉದಾ;3276 [3ರ ಭಾಜ್ಯತೆಯ ನಿಯಮ ಅಳವಡಿಸಿ ]

7ರ ಭಾಜ್ಯತೆಯ ನಿಯಮ;
                                   ದತ್ತ ಸಂಖ್ಯೆಯ ಕೊನೆಯ ಅಂಕಿಯನ್ನು ದ್ವಿಗುಣಗೊಳಿಸಿ ಉಳಿದ ಸಂಖ್ಯೆಯಿಂದ ಕಳೆಯಿರಿ. ಬರುವ ಉತ್ತರವು 0 ಅಥವಾ 7ರಿಂದ ಭಾಗವಾದರೆ ಆ ಸಂಖ್ಯೆಯು 7ರಿಂದ ಪೂರ್ಣವಾಗಿ ಭಾಗವಾಗುತ್ತದೆ.
ಉದಾ;1071------>107-(1*2)
                             =107-2=105--->10-(5*2)
                                                  --->0 ಆದ್ದರಿಂದ 1071ವು 7ರಿಂದ ಭಾಗವಾಗುತ್ತದೆ.

8ರ ಭಾಜ್ಯತೆಯ ನಿಯಮ;
                                   ದತ್ತ ಸಂಖ್ಯೆಯ ಕೊನೆಯ ೩ ಅಂಕಿಗಳು 8ರಿಂದ ಭಾಗವಾದರೆ ಆ ಇಡೀ ಸಂಖ್ಯೆಯು 8 ರಿಂದ ಭಾಗವಾಗುತ್ತದೆ.ಉದಾ;10136 ಇಲ್ಲಿ 136ವು 8ರಿಂದ ಭಾಗವಾಗುತ್ತದೆ.ಆದ್ದರಿಂದ 10136 ವು ಕೂಡ 8ರಿಂದ ಭಾಗವಾಗುತ್ತದೆ. [ಸೂಚನೆ:8ರಿಂದ ಭಾಗಿಸಲ್ಪಡುವ ಎಲ್ಲ ಸಂಖ್ಯೆಗಳು 2 ಮತ್ತು 4ರಿಂದ ಭಾಗಿಸಲ್ಪಡುತ್ತವೆ ಆದರೆ 2ಮತ್ತು 4ರಿಂದ ಭಾಗಿಸಲ್ಪಡುವ ಎಲ್ಲಾ ಸಂಖ್ಯೆಗಳು 8ರಿಂದ ಭಾಗಿಸಲ್ಪಡುವುದಿಲ್ಲ.ಉದಾ;1004,2228,6460,9892 ಇತ್ಯಾದಿ.]

9ರ ಭಾಜ್ಯತೆಯ ನಿಯಮ;
                                   ದತ್ತ ಸಂಖ್ಯೆಯ ಎಲ್ಲಾ ಅಂಕಿಗಳ ಮೊತ್ತವು 9ರಿಂದ ಭಾಗವಾದರೆ ಆ ಸಂಖ್ಯೆಯು 9ರಿಂದ ಪೂರ್ಣವಾಗಿ ಭಾಗವಾಗುತ್ತದೆ.ಉದಾ;13716 ಇಲ್ಲಿ 1+3+7+1+6--->18 ವು 9ರಿಂದ ಭಾಗವಾಗುತ್ತದೆ ಆದ್ದರಿಂದ 13716ವು ಕೂಡ 9ರಿಂದ ಭಾಗವಾಗುತ್ತದೆ.

10ರ ಭಾಜ್ಯತೆಯ ನಿಯಮ;
                                     ದತ್ತ ಸಂಖ್ಯೆಯ ಕೊನೆಯ ಅಂಕಿಯು 0 ಆದರೆ ಆ ಸಂಖ್ಯೆಯು 10ರಿಂದ ನಿಶ್ಯೇಷವಾಗಿ ಭಾಗವಾಗುತ್ತದೆ.ಉದಾ;102310,4580,78950,110 ಇತ್ಯಾದಿ.

11ರ ಭಾಜ್ಯತೆಯ ನಿಯಮ:
                                     ದತ್ತ ಸಂಖ್ಯೆಯ ಎಲ್ಲಾ ಅಂಕಿಗಳನ್ನು ಪರ್ಯಾಯವಾಗಿ ಕಳೆಯಿರಿ ಮತ್ತು ಕೂಡಿ.ಉತ್ತರವು 0 ಅಥವಾ 11ರಿಂದ ಭಾಗವಾದರೆ ಆ ಸಂಖ್ಯೆಯು 11ರಿಂದ ಭಾಗವಾಗುತ್ತದೆ.ಉದಾ;17523---->1-7+5-2+3=0

13ರ ಭಾಜ್ಯತೆಯ ನಿಯಮ;
                                    ಉದಾ;2366---->236+(6*4)
                                                      ---->236+24
                                                       ---->260--->26+(0*4)
                                                                     ---->26+0=26 ವು 13ರಿಂದ ಭಾಗವಾಗುತ್ತದೆ ಆದ್ದರಿಂದ 2366 ವು 13ರಿಂದ ಭಾಗವಾಗುತ್ತದೆ.

17ರ ಭಾಜ್ಯತೆಯ ನಿಯಮ;
                                    ಉದಾ;323
                                              323--->32-(3*5)
                                                   ---->32-15=17 ವು 17ರಿಂದ ಭಾಗವಾಗುತ್ತದೆ.ಆದ್ದರಿಂದ 323 ವು ಕೂಡ 17ರಿಂದ ಭಾಗವಾಗುತ್ತದೆ.

19ರ ವಿಭಾಜ್ಯತೆಯ ನಿಯಮ;
                                       ಉದಾ;21793---->2179+(3*2)
                                                          ----->2185
                                                           ----->218+(5*2)
                                                           ------>228
                                                           ------>22+(8*2)
                                                           ------->38 ವು 19ರಿಂದ ಭಾಗವಾಗುತ್ತದೆ.ಆದ್ದರಿಂದ 21793 ಕೂಡ 19ರಿಂದ ಭಾಗವಾಗುತ್ತದೆ.

4 ಕಾಮೆಂಟ್‌ಗಳು:

8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3

ಕಲಿಕಾ ಫಲ 3   ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು.   ಕಲಿಕಾ ...