I. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1. ಹುಲಿಯು ಒಂದು _______________
a)ಸಸ್ಯಹಾರಿ b)ಮಿಶ್ರಹಾರ c)ಮಾಂಸಹಾರಿ
2.ಇವುಗಳಲ್ಲಿ ಶಕ್ತಿ ನೀಡುವ ಪೋಷಕಾಂಶ ______________
a)ಪ್ರೋಟೀನ್ b)ಕೊಬ್ಬು c)ವಿಟಮಿನ್
3.ಇವುಗಳಲ್ಲಿ ನೈಸರ್ಗಿಕ ನಾರು ____________
a)ಸೆಣಬು b)ನೈಲಾನ್ c) ಪಾಲಿಯೆಸ್ಟರ್
4.ಇವುಗಳಲ್ಲಿ ಸಸ್ಯದ ಕಾಂಡದಿಂದ ಪಡೆಯುವ ನಾರು :__________
a) ರೇಷ್ಮೆ b)ಹತ್ತಿ c) ಸೆಣಬು
5.ಇವುಗಳಲ್ಲಿ ಬಟ್ಟೆಯನ್ನು ತಯಾರಿಸದ ಕ್ರಿಯೆ ___________
a)ನೂಲುವುದು b)ಹೆಣೆಯುವುದು c)ನೇಯುವುದು
II. 1ನೇ ಪಟ್ಟಿಯಲ್ಲಿರುವ ವಸ್ತುಗಳನ್ನು 2ನೇ ಪಟ್ಟಿಯಲ್ಲಿರುವ ಅವುಗಳ ಮೂಲದೊಂದಿಗೆ ಹೊಂದಿಸಿ ಬರೆಯಿರಿ.
1. ಚಪಾತಿ --- ಕಡ್ಲೆಕಾಳು
2. ಸಕ್ಕರೆ --- ತೆಂಗಿನ ನಾರು
3.ಪ್ರೋಟೀನ್ --- ಹಿಟ್ಟು, ನೀರು
4.ಕಾರ್ಬೋಹೈಡ್ರೇಟ್ --- ನೇಯುವುದು
5. ಹಗ್ಗ --- ಕಬ್ಬು
--- ಅಕ್ಕಿ
III.ಮೊದಲ ಜೋಡಿಯ ಸಂಬಂಧ ಅರಿತು ಎರಡನೇ ಜೋಡಿಯನ್ನು ಪೂರ್ಣಗೊಳಿಸಿ
1. ಹಾಲು : ಪ್ರಾಣಿಜನ್ಯ : : ಕ್ಯಾರೆಟ್ :_________
2. ಅಯೋಡಿನ್ ದ್ರಾವಣ :ಪಿಷ್ಟದ ಪರೀಕ್ಷೆ : : ತಾಮ್ರದ ಸಲ್ಪೇಟ್ ದ್ರಾವಣ :__________
3.ವಿಟಮಿನ್ ಸಿ : ಸ್ಕರ್ವಿ : : ವಿಟಮಿನ್ ಡಿ :_________
4.ನೂಲುವುದು : ನೂಲು : : ನೇಯುವುದು :_________
IV.ಕೆಳಗಿನವುಗಳಿಗೆ ಕಿರು ಉತ್ತರ ನೀಡಿ.
1.ತೆಂಗಿನ ನಾರಿನಿಂದ ತಯಾರಿಸುವ ವಸ್ತುವೊಂದನ್ನು ತಿಳಿಸಿ.
2.ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಏನೆನ್ನುವರು ?
3.ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ ಯಾವುದು?
4.ಸಂಶ್ಲೇಷಿತ ನಾರಿಗೆ ಒಂದು ಉದಾಹರಣೆ ಕೊಡಿ.
V.ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1.ಪ್ರಾಣಿಯ ನಾರುಗಳು _________ ಮತ್ತು _________
2.ನಮ್ಮ ಆಹಾರದಲ್ಲಿ ____________ ನ ಕೊರತೆಯಿಂದ ಇರುಳು ಕುರುಡುತನ ಉಂಟಾಗುತ್ತದೆ.
3.ಬೆರಿಬೆರಿ ರೋಗವು ____________ ನ ಕೊರತೆಯಿಂದ ಉಂಟಾಗುತ್ತದೆ.
4.ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.ಆದ್ದರಿಂದ ಇದು __________
VI.ಈ ಕೆಳಗಿನವುಗಳಿಗೆ ಸೂಕ್ತವಾದ ಒಂದು ಪದ ನೀಡಿ.
1.ಕಾರ್ಬೋಹೈಡ್ರೇಟ್ಗಳು,ಪ್ರೋಟೀನ್ ಗಳು,ಕೊಬ್ಬು,ವಿಟಮಿನ್ ಗಳು,ಮತ್ತು ಖನಿಜಗಳು;_______________
2.ಎಲ್ಲಾ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಹೊಂದಿರುವ ಆಹಾರ :______________
3.ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಕ್ರಿಯೆ :_____________
4.ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳು :______________
VII.ಈ ಕೆಳಗಿನವುಗಳಿಗೆ ಗೆರೆ ಹಾಕಿರುವ ಪದಗಳನ್ನು ತಿದ್ದಿ ಸರಿಯಾದ ಹೇಳಿಕೆ ರಚಿಸಿ.
1.ಗಿಳಿಯು ಪ್ರಾಣಿ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.
2.ಎಲ್ಲ ಜೀವಿಗಳಿಗೂ ಒಂದೇ ತರಹದ ಆಹಾರವು ಅವಶ್ಯ.
3.ದೇಹಕ್ಕೆ ಎಲ್ಲಾ ಪೋಷಕಗಳನ್ನು ಒದಗಿಸಲು ಮಾಂಸ ಮಾತ್ರ ಸಾಕು.
4.ಪಾಲಿಯೆಸ್ಟರ್ ಒಂದು ನೈಸರ್ಗಿಕ ನಾರು.