I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
1. BA +25 =B2 ರಲ್ಲಿ A,B ಗಳು ಅಂಕಿಗಳಾದರೆ A ಯ ಬೆಲೆ :
ಎ) 5 ಬಿ) 2 ಸಿ) 6 ಡಿ) 7
2. 31y5 ಎಂಬಂದು 9 ರ ಗುಣಕವಾಗಿದ್ದು y ಒಂದು ಅಂಕಿ ಆದರೆ y ಬೆಲೆ ;
ಎ) 6 ಬಿ) 7 ಸಿ) 8 ಡಿ) 0
3. 392_ ಈ ನಾಲ್ಕಂಕಿ ಸಂಖ್ಯೆಯು 3ರ ಗುಣಕವಾಗಿದೆ. ಹಾಗಾದರೆ ಖಾಲಿ ಬಿಟ್ಟ ಬಿಡಿ ಸ್ಥಾನದ ಅಂಕಿ;
ಎ) 2 ಬಿ) 3 ಸಿ) 4 ಡಿ) 5
4. a/b ನ ಸಂಕಲನದ ವಿಲೋಮಾಂಶ
ಎ)a ಬಿ) b ಸಿ) 0 ಡಿ)-a/b
5, x-2=7 ಸಮೀಕರಣದ ಪರಿಹಾರ;
ಎ) 9 ಬಿ) 5 ಸಿ) 7 ಡಿ) -9
II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ.
1.1A×A=9A : A= 6 : : 2B x B = 12B :_________
2. 1210 : 2,5,10 : : 594 : ________
3.ಗುಣಾಕಾರದ ಅನನ್ಯತಾಂಶ : ______ : : ಸಂಕಲನದ ಅನನ್ಯತಾಂಶ : 0
4. x - 2 =7 : 9 : : y+3= 10 :______
5.2x+3x=10 : 5x=10 : : 5y-2y=12 : ______
III.ಹೊಂದಿಸಿ ಬರೆಯಿರಿ.
1.ಆವೃತ ಗುಣ --- a + b = b + a
2.ಪರಿವರ್ತನಿಯ ನಿಯಮ --- a +(b + c) = (a + b) + c
3.ಸಹವರ್ತನಿಯ ನಿಯಮ --- a (b + c) = ab + ac
4,ವಿಭಾಜಕ ನಿಯಮ --- a + b ∈ R
IV.ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ.
1.ಒಂದು ಸಂಖ್ಯೆಯ ಬಿಡಿ ಸ್ಥಾನ ________ ಆದಾಗ ಮಾತ್ರ ಅದು ಹತ್ತರಿಂದ ಪೂರ್ಣವಾಗಿ ಭಾಗವಾಗುತ್ತದೆ.
2.ಸಂಖ್ಯೆಗಳಾದ_____ ಮತ್ತು _____ ಗಳಿಗೆ ತಾವೇ ವ್ಯುತ್ಕ್ರಮಗಳು.
3. 3x= 2x+18 ರಲ್ಲಿ x = __________
4.ಒಂದು ಸಂಖ್ಯೆಗೆ 5ನ್ನು ಸೇರಿಸಿದಾಗ 30 ಬರುತ್ತದೆ.ಇದರ ಸಮೀಕರಣ ರೂಪ ___________
V.ಸರಿಯೋ ತಪ್ಪೋ ತಿಳಿಸಿ.
1.616 ಸಂಖ್ಯೆಯು 3 ರಿಂದ ಪೂರ್ಣವಾಗಿ ಭಾಗವಾಗುತ್ತದೆ.
2.ದತ್ತ ಸಂಖ್ಯೆಯ ಅಂಕಿಗಳನ್ನು ಕೂಡುತ್ತಾ ಬಂದಾಗ ಏಕಾಂಕವು 9 ಆದರೆ ಆ ಸಂಖ್ಯೆಯು 9 ರಿಂದ ಭಾಗವಾಗುತ್ತದೆ.
3.ಬಾಗಲಬ್ಧ ಸಂಖ್ಯೆಗಳು ಸಂಕಲನದ ಪರಿವರ್ತನೀಯ ಗುಣವನ್ನು ಹೊಂದಿವೆ.
4. 2x = 8 ಆದಾಗ x =⁸/₂ ಆಗುತ್ತದೆ.
VI.ಕೆಳಗಿನವುಗಳಿಗೆ ಕಿರು ಉತ್ತರ ಕೊಡಿ.
1. 2,3,5,9,10 ಗಳಿಂದ ಪೂರ್ಣವಾಗಿ ಭಾಗವಾಗುವ ಒಂದು ಮೂರಂಕಿ ಸಂಖ್ಯೆ ರಚಿಸಿ.
2. 21013 ವು 9 ರಿಂದ ಪೂರ್ಣವಾಗಿ ಭಾಗವಾಗಲು ಅದಕ್ಕೆ ಕೂಡ ಬೇಕಾದ ಕನಿಷ್ಠ ಸಂಖ್ಯೆ ಏನು?
3. 2x/3 = 18 ಸಮೀಕರಣ ಬಿಡಿಸಿರಿ.
4.ಬೈಚುಂಗನ ಅಪ್ಪ ಬೈಚುಂಗನ ಅಜ್ಜನಿಗಿಂತ 26 ವರ್ಷ ಚಿಕ್ಕವನು ಮತ್ತು ಬೈಚುಂಗನಿಗಿಂತ 29 ವರ್ಷ ದೊಡ್ಡವನು. ಮೂವರ ವಯಸ್ಸುಗಳ ಮೊತ್ತ 135 ವರ್ಷಗಳು.ಇದನ್ನು ಸಮೀಕರಣ ರೂಪದಲ್ಲಿ ಬರೆಯಿರಿ.
VII.ಈ ಕೆಳಗಿನ ಲೆಕ್ಕಾಚಾರಗಳಿಗೆ ನೀಡಿರುವ ಹಂತಗಳನ್ನು ಅನುಕ್ರಮವಾಗಿ ಒಂದರ ಕೆಳಗೆ ಒಂದರಂತೆ ಜೋಡಿಸಿ ಬರೆಯಿರಿ.
1. -⅚ ಮತ್ತು ⅝ ಇವುಗಳ ನಡುವೆ ಯಾವುದಾದರೂ 10 ಭಾಗಲಬ್ಧ ಸಂಖ್ಯೆ ಬರೆಯುವುದು.
[-5×4/6×4 = 20/24] [-19/24, -18/24, -17/24 ….14/24] [5×3/8×3 =15/24] [6,8 ಗಳ ಲಸಾಅ = 24]
2.ಸಮೀಕರಣ ಬಿಡಿಸುವುದು [8x +4=3 (x-1)+7] [5x = 0] [8x-3x=4-4] [x=0] [8x +4=3x-3+7] [x =⁰/₅]
3.ಸಮೀಕರಣ ಬಿಡಿಸಿ; [10x+7=3x-28] [7x=-35] [x=-5] [10x-3x= -28 -7] [x=-³⁵/₇]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ