ಏಕರೀತಿಯ ಪರಮಾಣುಗಳನ್ನು ಹೊಂದಿರುವ ವಸ್ತುಗಳನ್ನು ಧಾತುಗಳು ಎನ್ನುತ್ತೇವೆ.ವಸ್ತುವಿನ ಅತ್ಯಂತ ಸೂಕ್ಷ್ಮ ಘಟಕವನ್ನು ಪರಮಾಣು ಎನ್ನುತ್ತೇವೆ.
ದಾತುಗಳನ್ನು ಅವುಗಳು ತೋರಿಸುವ ಲಕ್ಷಣಗಳ ಆಧಾರದ ಮೇಲೆ ಎರಡು ವಿಧಗಳಾಗಿ ವರ್ಗೀಕರಿಸಬಹುದು;ಅವುಗಳೆಂದರೆ ಲೋಹಗಳು ಮತ್ತು ಅಲೋಹಗಳು.
ಲೋಹಗಳ ಭೌತಿಕ ಲಕ್ಷಣಗಳು;
1)ಲೋಹಗಳು ಸಾಮಾನ್ಯವಾಗಿ ಘನ ಸ್ಥಿತಿಯಲ್ಲಿರುತ್ತವೆ.
2)ಲೋಹಗಳು ಹೊಳೆಯುತ್ತವೆ.
3)ಲೋಹಗಳು ಉಷ್ಣ ಮತ್ತು ವಿದ್ಯುತ್ ನ ಉತ್ತಮ ವಾಹಕಗಳಾಗಿವೆ.
4)ಲೋಹಗಳು ತನ್ಯ ಮತ್ತು ಲೋಹಗಳು ತನ್ಯ ಮತ್ತು ಕುಟ್ಯ ಆಗಿವೆ; ತನ್ಯ ಎಂದರೆ ಲೋಹಗಳನ್ನು ತಂತಿ ಗಳನ್ನಾಗಿ ಎಳೆಯಬಹುದು, ಕುಟ್ಯ ಎಂದರೆ ಲೋಹಗಳನ್ನು ಕುಟ್ಟಿ ಹಾಳೆಗಳನ್ನಾಗಿ ಮಾಡಬಹುದು.
5)ಲೋಹಗಳು ಕಠಿಣವಾಗಿದ್ದು ಉನ್ನತ ದ್ರವನ ಬಿಂದುವನ್ನು ಹೊಂದಿರುತ್ತವೆ.
ಲೋಹಗಳ ರಾಸಾಯನಿಕ ಲಕ್ಷಣಗಳು;
1)ಲೋಹಗಳು ಎಲೆಕ್ಟ್ರಾನುಗಳನ್ನು ಬಿಟ್ಟುಕೊಡುತ್ತವೆ.
2)ಲೋಹಗಳು ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಹೈಡ್ರೋಜನ್ ಅನ್ನು ಬಿಡುಗಡೆ ಮಾಡುತ್ತವೆ.
3)ಲೋಹಗಳು ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಪ್ರತ್ಯಾಮ್ಲೀಯ ಆಕ್ಸೈಡ್ ಗಳನ್ನು ಉತ್ಪತ್ತಿಮಾಡುತ್ತವೆ.
4)ಲೋಹಗಳು ಹೈಡ್ರೋಜನ್ ನೊಂದಿಗೆ ಪ್ರತಿಕ್ರಿಯಿಸಿ ಹೈಡ್ರೈಡ್ ಗಳನ್ನು ಉತ್ಪತ್ತಿಮಾಡುತ್ತವೆ.
ಅಲೋಹಗಳ ಭೌತಿಕ ಲಕ್ಷಣಗಳು;
1)ಅಲೋಹಗಳು ಘನ, ದ್ರವ, ಅನಿಲ ಸ್ಥಿತಿಗಳಲ್ಲಿ ದೊರೆಯುತ್ತವೆ.
2)ಅಲೋಹಗಳು ಹೊಳೆಯುವುದಿಲ್ಲ.
3)ಅಲೋಹಗಳು ಉಷ್ಣ ಮತ್ತು ವಿದ್ಯುತ್ ಅವಾಹಕ ಗಳಾಗಿವೆ.
4)ಅಲೋಹಗಳು ತನ್ಯವೂ ಅಲ್ಲ ಕುಟ್ಯವೂ ಅಲ್ಲ.
5)ಅಲೋಹಗಳು ಸಾಮಾನ್ಯವಾಗಿ ಮೃದುವಾಗಿರುತ್ತವೆ ಮತ್ತು ಕಡಿಮೆ ದ್ರವನಬಿಂದು ಹೊಂದಿರುತ್ತವೆ.
ಅಲೋಹಗಳ ರಾಸಾಯನಿಕ ಲಕ್ಷಣಗಳು;
1)ಅಲೋಹಗಳು ಎಲೆಕ್ಟ್ರಾನುಗಳನ್ನು ಸ್ವೀಕಾರ ಮಾಡುತ್ತವೆ.
2)ಅಲೋಹಗಳು ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ಹೈಡ್ರೋಜನ್ ಅನ್ನು ಬಿಡುಗಡೆ ಮಾಡುವುದಿಲ್ಲ.
3)ಅಲೋಹಗಳು ಆಕ್ಸಿಜನ್ ನೊಂದಿಗೆ ಪ್ರತಿಕ್ರಿಯಿಸಿ ಆಮ್ಲೀಯ ಆಕ್ಸೈಡ್ ಗಳನ್ನು ಉತ್ಪತ್ತಿಮಾಡುತ್ತವೆ.
4)ಅಲೋಹಗಳು ಹೈಡ್ರೋಜನ್ ನೊಂದಿಗೆ ಪ್ರತಿಕ್ರಿಯಿಸಿ ಸಹವೇಲೆನ್ಸೀಯ ಸಂಯುಕ್ತಗಳನ್ನು ಕೊಡುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ