ಕಾರ್ಬನ್ನಿನ ಸಂಕೇತ C ಆಗಿದೆ.
ಕಾರ್ಬನ್ನಿನ ಪರಮಾಣು ಸಂಖ್ಯೆ 6, ಪರಮಾಣು ರಾಶಿ ಸಂಖ್ಯೆ 12.
ಕಾರ್ಬನ್ನಿನ ಎಲೆಕ್ಟ್ರಾನ್ ವಿನ್ಯಾಸ 1s²2s²2p²
ಕಾರ್ಬನ್ನಿನ ವ್ಯಾಲೆನ್ಸಿ 4 ಆಗಿದೆ;ಹಾರ್ಮೋನಿನ ಅತ್ಯಂತ ಹೊರಕವಚದಲ್ಲಿ 4 ಎಲೆಕ್ಟ್ರಾನ್ ಗಳನ್ನು ಹೊಂದಿದೆ.ತನ್ನ ಅತ್ಯಂತ ಹತ್ತಿರದ ನೋಬಲ್ ಗ್ಯಾಸ್ ವಿನ್ಯಾಸವನ್ನು ಹೊಂದಲು ಕಾರ್ಬನ್ ಹೈಡ್ರೊಜನ್ ನೊಂದಿಗೆ 4 ಬಂಧಗಳನ್ನು ಮಾಡಿಕೊಳ್ಳುತ್ತದೆ.
ಕಾರ್ಬನ್ನಿನ ಪ್ರಾಮುಖ್ಯತೆ;
ಅತಿ ಹೆಚ್ಚು ಸಂಯುಕ್ತಗಳನ್ನು ಮಾಡಿರುವ ಧಾತುಗಳಲ್ಲಿ ಕಾರ್ಬನ್ ಗೆ ಎರಡನೇ ಸ್ಥಾನವಿದೆ.
ಆಹಾರದ ಪೋಷಕಾಂಶಗಳು ಕಾರ್ಬನ್ ಸಂಯುಕ್ತಗಳಿಂದ ಆಗಿದೆ;ಕಾರ್ಬೊಹೈಡ್ರೇಟ್' ಕೊಬ್ಬು ,ಪ್ರೊಟೀನ್ ಗಳು ಕಾರ್ಬನ್ ಸಂಯುಕ್ತಗಳಿಂದ ಆಗಿದೆ.
ಕಾರ್ಬನಿನ ಸಂಯುಕ್ತಗಳನ್ನು ಉರುವಲುಗಳಾಗಿ ಬಳಸುತ್ತೇವೆ.
ನೂಳುಗಳಾದ ಹತ್ತಿ ರೇಷ್ಮೆ ವುಲ್ಲನ್ ಮೊದಲಾದವುಗಳು ಕಾರ್ಬನಿನ ಸಂಯುಕ್ತಗಳು ಆಗಿದೆ.
ಜೀವಕೋಶದ ಪ್ರೋಟಾಪ್ಲಸಂ ಕಾರ್ಬನ್ ಸಂಯುಕ್ತಗಳಿಂದ ಆಗಿದೆ.
ಕಾರ್ಬನ್ನಿನ ದೊರೆಯುವಿಕೆ :
ಕಾರ್ಬನ್ ದಾತು ಮುಕ್ತ ರೂಪ ಹಾಗೂ ಸಂಯುಕ್ತ ರೂಪದಲ್ಲಿ ದೊರಕುತ್ತದೆ.ಕಾರ್ಬನ್ ದಾತು ವಜ್ರ, ಗ್ರಾಫೈಟ್ ,ಕಲ್ಲಿದ್ದಲು, ಮರದ ಇದ್ದಿಲು, ಕಾಡಿಗೆ ಗಳಾಗಿ ಮುಕ್ತ ರೂಪದಲ್ಲಿ ದೊರೆಯುತ್ತದೆ.
ಕಾರ್ಬನ್ ಧಾತುವು ಈ ಕೆಳಕಂಡ ಸಂಯುಕ್ತಗಳಾಗಿ ಪ್ರಕೃತಿಯಲ್ಲಿ ದೊರಕುತ್ತದೆ;ಕಾರ್ಬನ್ ಡೈಯಾಕ್ಸೈಡ್,ನೈಸರ್ಗಿಕ ಅನಿಲ,ಪೆಟ್ರೋಲಿಯಂ ಅನಿಲ, ಸೆಲ್ಯುಲೋಸ್, ಕಾರ್ಬೊನೇಟ್ ಗಳು (ಸುಣ್ಣದಕಲ್ಲು, ಅಮೃತಶಿಲೆ ,ಕಪ್ಪೆಚಿಪ್ಪು ಇತ್ಯಾದಿ).
ಕಾರ್ಬನ್ ನ ಬಹುರೂಪತೆ;
ಒಂದೇ ರಾಸಾಯನಿಕ ವಸ್ತು ಬೇರೆಬೇರೆ ಭೌತಿಕ ಲಕ್ಷಣಗಳುಳ್ಳ ವಸ್ತುಗಳಾಗಿ ದೊರೆಯುವುದಕ್ಕೆ ಆ ರಾಸಾಯನಿಕ ವಸ್ತುವಿನ ಬಹುರೂಪತೆ ಎನ್ನುವರು.
ವಜ್ರ, ಗ್ರಾಫೈಟ್, ಫುಲ್ಲರಿನ್, ಕಲ್ಲಿದ್ದಲು, ಕೋಕ್, ಕಾಡಿಗೆ, ಇದ್ದಿಲು (ಮರದ ಇದ್ದಿಲು, ಮೂಳೆಯ ಇದ್ದಿಲು, ಸಕ್ಕರೆಯ ಇದ್ದಿಲು).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ