[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]
ಚಲನೆಗೆ ಸಂಬಂಧಿಸಿದ ಕೆಲವು ಅಂಶಗಳು;
ಚಲಿಸಿದ ದೂರ; ಕಾಯವು ಚಲಿಸಿದ ಪಥದ ಉದ್ದವನ್ನು ಚಲಿಸಿದ ದೂರ ಎನ್ನುತ್ತೇವೆ.
ಸ್ಥಾನ ಪಲ್ಲಟ ; ಕಾಯವೊಂದು ಚಲಿಸಿದಾಗ ಅದರ ಆರಂಭ ಸ್ಥಾನದಿಂದ ಅಂತಿಮ ಸ್ಥಾನಕ್ಕಿರುವ ಕನಿಷ್ಠ ದೂರವನ್ನು ಸ್ಥಾನಪಲ್ಲಟ ಎನ್ನುತ್ತೇವೆ.
ಜವ; ಏಕಮಾನ ಕಾಲದಲ್ಲಿ ಕಾಯವು ಚಲಿಸಿದ ದೂರಕ್ಕೆ ಜವ ಎನ್ನುತ್ತೇವೆ. ಜವದ ಅಂತರಾಷ್ಟ್ರೀಯ ಏಕಮಾನ ಮೀಟರ್ ಪರ್ ಸೆಕೆಂಡ್ ಆಗಿದೆ.
ಜವ= ಚಲಿಸಿದ ದೂರ ÷ ಕಾಲ
ವೇಗ ; ಕಾಯ ಚಲಿಸಿದಾಗ ಏಕಮಾನ ಕಾಲದಲ್ಲಾದ ಸ್ಥಾನಪಲ್ಲಟಕ್ಕೆ ಅಥವಾ ಸ್ಥಾನ ಬದಲಾವಣೆಯ ದರಕ್ಕೆ ವೇಗ ಎನ್ನುತ್ತೇವೆ.
ವೇಗ = ಸ್ಥಾನ ಪಲ್ಲಟ ÷ ಕಾಲ
ವೇಗೋತ್ಕರ್ಷ (a) ; ವೇಗ ಬದಲಾವಣೆಯ ದರಕ್ಕೆ ವೇಗೋತ್ಕರ್ಷ ಎನ್ನುತ್ತೇವೆ.
a =ವೇಗದಲ್ಲಿ ಆದ ಬದಲಾವಣೆ ÷ ಬದಲಾವಣೆಯಾಗಲು ತೆಗೆದುಕೊಂಡ ಕಾಲ
[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]
ಚಲನೆಯ ಸಮೀಕರಣಗಳು (a = v - u ÷ t);
1) v = u + at
2) s = ut+1/2 at²
3) v² = u² + 2as
ಇಲ್ಲಿ ; a =ವೇಗೋತ್ಕರ್ಷ
u =ಆರಂಭಿಕ ವೇಗ
v =ಅಂತಿಮ ವೇಗ
t =ಕಾಲ
s = ಚಲಿಸಿದ ದೂರ ಅಥವಾ ಸ್ಥಾನಪಲ್ಲಟ
ಆವರ್ತಕ ಚಲನೆ;
ಸಮಾನ ಕಾಲಾಂತರದಲ್ಲಿ ಪುನರಾವರ್ತಿತ ಚಲನೆಯನ್ನು ಆವರ್ತಕ ಚಲನೆ ಎನ್ನುವರು.
ಆವರ್ತಕ ಚಲನೆಯನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು;ಅವುಗಳೆಂದರೆ ಆಂದೋಲ ಚಲನೆ ಮತ್ತು ತರಂಗ ಅಥವಾ ಅಲೆ ಚಲನೆ.
ಆಂದೋಲ ಚಲನೆ;ಹಿಂದಕ್ಕೂ ಮುಂದಕ್ಕೂ ತೊನೆದಾಡುವ ರೀತಿಯ ಚಲನೆಯನ್ನು ಆಂದೋಲ ಚಲನೆ ಎನ್ನುವರು.
ಒಂದು ಆಂದೋಲ :ಆಂದೋಲ ಚಲನೆಯಲ್ಲಿರುವ ಕಾಯವು ತನ್ನ ಸಮತೋಲನ ಸ್ಥಾನದಿಂದ ಯಾವ ದಿಕ್ಕಿನಲ್ಲಿ ಚಲಿಸಲಾರಂಭಿಸುತ್ತದೆಯೋ ಅದೇ ದಿಕ್ಕಿನಲ್ಲಿ ಪುನಹ ಸಮತೋಲನ ಸ್ಥಾನವನ್ನು ದಾಟಲಾರಂಭಿಸಿದಾಗ ಒಂದು ಆಂದೋಲ ಪೂರ್ಣವಾಗುತ್ತದೆ.
ಆಂದೋಲನ ಅವಧಿ (T) ; ಒಂದು ಆಂದೋಲ ಕ್ಕೆ ಕಾಯ ತೆಗೆದುಕೊಳ್ಳುವ ಸಮಯವನ್ನು ಆಂದೋಲನ ಅವಧಿ ಎಂದು ಕರೆಯುತ್ತಾರೆ.ಆಂದೋಲ ಅವಧಿಯ ಅಂತರಾಷ್ಟ್ರೀಯ ಏಕಮಾನ ಸೆಕೆಂಡ್ (S) ಆಗಿದೆ.
ಆಂದೋಲ ದ ಆವೃತ್ತಿ; ಒಂದು ಸೆಕೆಂಡ್ ನಲ್ಲಿ ಆಗುವ ಆಂದೋಲ ಗಳ ಸಂಖ್ಯೆಯನ್ನು ಆಂದೋಲ ಆವೃತ್ತಿ ಎನ್ನುತ್ತೇವೆ.ಆಂದೋಲ ದ ಆವೃತ್ತಿಯ ಅಂತರಾಷ್ಟ್ರೀಯ ಏಕಮಾನ ಹರ್ಟ್ಸ್ (Hz) ಆಗಿದೆ.
ಆಂದೋಲದ ಪಾರ; ಸಮತೋಲನ ಸ್ಥಾನದಿಂದ ಗರಿಷ್ಠ ಸ್ಥಾನಪಲ್ಲಟ ಸ್ಥಾನಕಿರುವ ಅಂತರವನ್ನು ಆಂದೋಲದ ಪಾರ ಎನ್ನುವರು.
ಸರಳ ಲೋಲಕ :
ಹಗುರವಾದ ವಿಸ್ತರಿಸಲಾಗಿದೆ ತಿರುಚಿ ಕೊಳ್ಳದ ದಾರದ ನೆರವಿನಿಂದ ತೂಗಾಡುತ್ತಿರುವ ಬಿಂದು ರಾಶಿಯನ್ನು ಸರಳ ಲೋಲಕ ಎನ್ನುವರು.
ಸರಳ ಲೋಲಕದ ಮೂರು ನಿಯಮಗಳು ;
I.ಲೋಲಕದ ಆಂದೋಲ ಅವಧಿ ಆಂದೋಲನದ ಪಾರವನ್ನು ಅವಲಂಬಿಸಿರುವುದಿಲ್ಲ.
II.ಆಂದೋಲ ಅವಧಿಯು ಲೋಲಕದ ಗುಂಡಿನ ರಾಶಿ,ತೂಕ,ಸಾಂದ್ರತೆಗಳನ್ನು ಅವಲಂಬಿಸಿರುವುದಿಲ್ಲ.
III. √L/T ಒಂದು ಸ್ಥಿರ. ಇಲ್ಲಿ L= ಲೋಲಕದ ಉದ್ದ T = ಆಂದೋಲಾವಧಿ.
ಸರಳ ಲೋಲಕದ ಉಪಯೋಗಗಳು;
ಸರಳ ಲೋಲಕ ವನ್ನು ಯಾಂತ್ರಿಕ ಗಡಿಯಾರಗಳಲ್ಲಿ ಬಳಸುತ್ತಾರೆ.
ಸರಳ ಲೋಲಕ ವನ್ನು ಗುರುತ್ವ ವೇಗೋತ್ಕರ್ಷದ ಪತ್ತೆ ಮಾಡುವಿಕೆಯಲ್ಲಿ ಬಳಸುತ್ತಾರೆ.
ತರಂಗ ಅಥವಾ ಅಲೆ ಚಲನೆ;
ಶಕ್ತಿಯನ್ನು ಹೊತ್ತ ಆವರ್ತಕ ಕ್ಷುಬ್ಧತೆಯ ಪ್ರಸರಣವೇ ತರಂಗ ಚಲನೆ.
ತರಂಗದ ವಿಧಗಳು;
ತರಂಗಗಳಲ್ಲಿ ಎರಡು ವಿಧಗಳಿವೆ;
1.ಅಡ್ಡ ತರಂಗ ;ಮಾಧ್ಯಮದ ಕಣಗಳ ಕಂಪನವು ತರಂಗ ಪ್ರಸರಣದ ದಿಕ್ಕಿಗೆ ಲಂಬ ವಾಗಿದ್ದರೆ ಆ ತರಂಗವನ್ನು ಅಡ್ಡತರಂಗ ಎನ್ನುವರು.ಉದಾಹರಣೆಗೆ ನೀರಿನ ತರಂಗ.
2.ನೀಳತರಂಗ ;ಮಾಧ್ಯಮ ದ ಕಣಗಳ ಕಂಪನವು ತರಂಗ ಪ್ರಸರಣದ ದಿಕ್ಕಿನಲ್ಲಿದ್ದರೆ ಆ ತರಂಗವನ್ನು ನೀಳತರಂಗ ಎನ್ನುವರು.ಉದಾಹರಣೆಗೆ ಧ್ವನಿ ತರಂಗ.
ತರಂಗ ಚಲನೆಗೆ ಸಂಬಂಧಿಸಿದ ಅಂಶಗಳು;
ತರಂಗದ ಉದ್ದ (λ); ತರಂಗದ 2 ಅನುಕ್ರಮ ಶೃಂಗಗಳ ನಡುವಿನ ಅಂತರವನ್ನು ತರಂಗದ ಉದ್ದ ಎನ್ನುವರು.
ತರಂಗದ ವೇಗ (V);
V= nλ ಇಲ್ಲಿ n = ಕಂಪನಾಂಕ (ಆವೃತ್ತಿ ) λ= ತರಂಗದ ಉದ್ದ.
[ಈ ಲೇಖನವನ್ನು ಚಲನೆಯ ಮೈಂಡ್ ಮ್ಯಾಪ್ ಅನ್ನು ಉಪಯೋಗಿಸಿಕೊಂಡು ಬರೆಯಲಾಗಿದೆ.]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ