ವಿದ್ಯುತ್ ಶಕ್ತಿಯ ಏಕಮಾನ ಗಳಾಗಿ ಜೂಲ್ (J),ಕಿಲೋ ಜೂಲ್ (1000J), ಯೂನಿಟ್ (ಕಿಲೋವ್ಯಾಟ್ - ಗಂಟೆ) ಗಳನ್ನು ಬಳಸುತ್ತೇವೆ.ವಿದ್ಯುಚ್ಛಕ್ತಿಯ ಅಂತರಾಷ್ಟ್ರೀಯ ಏಕಮಾನ ಜೂಲ್ ಆಗಿದೆ.
ವಿದ್ಯುಚಕ್ತಿ ಏಕಮಾನ ಒಂದು ಯೂನಿಟ್ ಎಂದರೇನು ?
ಒಂದು ಸೆಕೆಂಡಿಗೆ ಸಾವಿರ ಜೂಲ್ (1000J) ನಂತೆ ಸತತ ಒಂದು ಗಂಟೆಗಳ ಕಾಲ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮಾಣಕ್ಕೆ ಒಂದು ಯೂನಿಟ್ ಎನ್ನುತ್ತೇವೆ.ಯೂನಿಟ್ ಅನ್ನು ಕಿಲೋವ್ಯಾಟ್-ಗಂಟೆ (kWh ) ನಿಂದಲೂ ಸೂಚಿಸುತ್ತೇವೆ.
ವಿದ್ಯುತ್ ಸಾಮರ್ಥ್ಯ ಎಂದರೇನು ?
ವಿದ್ಯುಚ್ಛಕ್ತಿ ಉಪಯೋಗಿಸಲ್ಪಡುವ ದರಕ್ಕೆ ವಿದ್ಯುತ್ ಸಾಮರ್ಥ್ಯ ಎನ್ನುತ್ತೇವೆ.
P =E/t ಇಲ್ಲಿ P = ವಿದ್ಯುತ್ ಸಾಮರ್ಥ್ಯ.
E =ಉಪಯೋಗವಾದ ವಿದ್ಯುಚ್ಛಕ್ತಿ .
t=ಉಪಯೋಗಿಸಲು ತೆಗೆದುಕೊಂಡ ಕಾಲ
ವಿದ್ಯುತ್ ಸಾಮರ್ಥ್ಯದ ಏಕಮಾನ ವ್ಯಾಟ್ ಆಗಿದೆ. ಒಂದು ವ್ಯಾಟ್ = 1J/S
ವಿದ್ಯುತ್ ಪ್ರವಾಹದ ಪರಿಣಾಮಗಳು ;
ವಿದ್ಯುತ್ ಪ್ರವಾಹವು ಮೂರು ಮುಖ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ.
ಅವುಗಳೆಂದರೆ ವಿದ್ಯುತ್ ಕಾಂತಿಯ ಪರಿಣಾಮ, ವಿದ್ಯುತ್ ನ ರಾಸಾಯನಿಕ ಪರಿಣಾಮ, ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ.
ವಿದ್ಯುತ್ಕಾಂತಿಯ ಪರಿಣಾಮವನ್ನು ಹೆನ್ರಿ ಕ್ರಿಶ್ಚಿಯನ್ ಓಯರ್ ಸ್ಟೆಡ್ ಪತ್ತೆಮಾಡಿದರು.ಕಾಂತತ್ವ ಮತ್ತು ವಿದ್ಯುಚ್ಛಕ್ತಿ ಜೊತೆಗೆ ಇರುತ್ತವೆ.ತಂತಿಯಲ್ಲಿ ವಿದ್ಯುತ್ ಹರಿದಾಗ ತಂತಿಯ ಸುತ್ತಲೂ ಕಾಂತಕ್ಷೇತ್ರ ಉಂಟಾಗುತ್ತದೆ. ಇದನ್ನು ವಿದ್ಯುತ್ ಕಾಂತಿಯ ಪರಿಣಾಮ ಎನ್ನುವರು.
ವಿದ್ಯುತ್ ನ ರಾಸಾಯನಿಕ ಪರಿಣಾಮ:
ವಿದ್ಯುತ್, ಕೆಲವು ರಾಸಾಯನಿಕಗಳ ಮೂಲಕ ಹರಿದಾಗ ರಾಸಾಯನಿಕ ಬದಲಾವಣೆಯನ್ನು ಉಂಟುಮಾಡುತ್ತದೆ. ಇದನ್ನು ವಿದ್ಯುತ್ನ ರಾಸಾಯನಿಕ ಪರಿಣಾಮ ಎನ್ನುತ್ತೇವೆ.ವಿದ್ಯುತ್ತಿನಿಂದ ರಾಸಾಯನಿಕ ಬದಲಾವಣೆಗೆ ಒಳಗಾಗುವ ರಾಸಾಯನಿಕಗಳನ್ನು ವಿದ್ಯುತ್ ವಿಭಾಜ್ಯ ಗಳು ಅಥವಾ ಎಲೆಕ್ಟ್ರೋಲೈಟ್ ಗಳು ಎನ್ನುತ್ತೇವೆ.ಉದಾಹರಣೆಗೆ ಅಡುಗೆ ಉಪ್ಪು,ಸಕ್ಕರೆ, ಹರಳೆಣ್ಣೆ ಇತ್ಯಾದಿ.
ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ;
ತಂತಿಯಲ್ಲಿ ವಿದ್ಯುತ್ ಹರಿದಾಗ ಸ್ವಲ್ಪ ವಿದ್ಯುಚ್ಛಕ್ತಿಯು ಉಷ್ಣವಾಗಿ ಪರಿವರ್ತನೆಯಾಗುತ್ತದೆ.ಇದನ್ನು ವಿದ್ಯುತ್ನ ಉಷ್ಣೋತ್ಪನ್ನ ಪರಿಣಾಮ ಎನ್ನುತ್ತೇವೆ.ವಿದ್ಯುತ್ ಬಲ್ಬ್ ,ಬಾಯ್ಲರ್ ,ವಿದ್ಯುತ್ ಇಸ್ತ್ರಿ ಪೆಟ್ಟಿಗೆ, ವಿದ್ಯುತ್ ಫ್ಯೂಸ್ ಇತ್ಯಾದಿ ಉಪಕರಣಗಳು ವಿದ್ಯುತ್ ನ ಉಷ್ಣೋತ್ಪನ್ನ ಪರಿಣಾಮದ ಮೇಲೆ ಕೆಲಸ ಮಾಡುತ್ತವೆ.
ವಿದ್ಯುತ್ ಫ್ಯೂಸ್ ಎಂದರೇನು ?
ವಿದ್ಯುತ್ ಫ್ಯೂಸ್ ಒಂದು ಸುರಕ್ಷಾ ಸಾಧನ.ಇದು ಸೀಸ ಮತ್ತು ತವರ ದಿಂದ ಆದ ಮಿಶ್ರಲೋಹ ವಾಗಿದೆ.ಇದಕ್ಕೆ ವಿದ್ಯುತ್ ರೋಧ ಹೆಚ್ಚು ಮತ್ತು ದ್ರವನಬಿಂದು ಕಡಿಮೆಯಾಗಿದೆ.
ಇದನ್ನು ವಿದ್ಯುನ್ಮಂಡಲ ದ ಆರಂಭದಲ್ಲಿ ಜೋಡಿಸಿರುತ್ತಾರೆ.
ಯಾವುದೇ ಕಾರಣಗಳಿಂದ ವಿದ್ಯುನ್ಮಂಡಲ ಕ್ಕೆ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ವಿದ್ಯುತ್ ಹರಿದು ಬಂದಾಗ ವಿದ್ಯುತ್ ಫ್ಯೂಸ್ ಕರಗಿ ವಿದ್ಯುನ್ಮಂಡಲಕ್ಕೆ ವಿದ್ಯುತ್ ಪ್ರವಾಹವನ್ನು ಕಡಿತಗೊಳಿಸುತ್ತದೆ.
ದ್ರವನಬಿಂದು ಕಡಿಮೆ ಮತ್ತು ವಿದ್ಯುತ್ ರೋಧ ಹೆಚ್ಚಿರುವುದರಿಂದ ವಿದ್ಯುತ್ ಫ್ಯೂಸ್ ಈ ಕಾರ್ಯ ಮಾಡಲು ಸಾಧ್ಯವಾಯಿತು.
ಇದರಿಂದ ವಿದ್ಯುನ್ಮಂಡಲ ಮತ್ತು ಅದರಲ್ಲಿ ಜೋಡಿಸಿರುವ ಬೆಲೆಬಾಳುವ ಉಪಕರಣಗಳು ಸುರಕ್ಷಿತವಾಗಿ ಉಳಿಯುತ್ತವೆ.ಹೀಗೆ ವಿದ್ಯುತ್ ಫ್ಯೂಸ್ ಉಂಟಾಗ ಬಹುದಾದ ದೊಡ್ಡ ಹಾನಿಯನ್ನು ತಪ್ಪಿಸುತ್ತದೆ.
ವಿದ್ಯುತ್ ಶಕ್ತಿಯ ಆಕರಗಳು ;
ವಿದ್ಯುಜ್ಜನಕ ವಿದ್ಯುತ್ತನ್ನು ಗಾಳಿ ನೀರು ಇವುಗಳ ಶಕ್ತಿಯಿಂದ ಉತ್ಪಾದಿಸುತ್ತದೆ.
ಸೌರಕೋಶಗಳು ಸೌರಶಕ್ತಿಯಿಂದ ವಿದ್ಯುತ್ ಅನ್ನು ಉತ್ಪಾದಿಸುತ್ತವೆ.
ವಿದ್ಯುತ್ ಕೋಶವು ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನವಾಗಿದೆ.
ಶುಷ್ಕಕೋಶ ವೂ ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ