ಪರಿಕಲ್ಪನೆಗಳನ್ನು ಮೈಂಡ್ ಮ್ಯಾಪ್ (ಪರಿಕಲ್ಪನಾ ನಕ್ಷೆ) ಬಳಸಿಕೊಂಡು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.8ನೇ ತರಗತಿ ವಿಜ್ಞಾನ ಕಲಿಕಾ ಚೇತರಿಕೆ.
ಮಂಗಳವಾರ, ಫೆಬ್ರವರಿ 8, 2022
ಉಷ್ಣ ಎಂದರೇನು?
ಉಷ್ಣ(Heat)ವು ಶಕ್ತಿಯ ಒಂದು ರೂಪ.ಒಂದು ವಸ್ತುವಿನ ಉಷ್ಣವು ಆ ವಸ್ತುವಿನಲ್ಲಿರುವ ಅಣುಗಳ ಚಲನ ಶಕ್ತಿಯ(Kinetic energy) ಮೊತ್ತ ಆಗಿರುತ್ತದೆ.ವಸ್ತುವಿನ ಅಣುಗಳು ತಮ್ಮ ಚಲನೆಯ ಕಾರಣದಿಂದ ಗಳಿಸಿಕೊಳ್ಳುವ ಶಕ್ತಿಯನ್ನು ಅವುಗಳ ಚಲನಶಕ್ತಿ ಎನ್ನುತ್ತೇವೆ. ಉಷ್ಣವನ್ನು ಅಳೆಯುವ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಉಷ್ಣದ ಪರಿಣಾಮಗಳು ;
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ ಆ ವಸ್ತು ಹಿಗ್ಗುತ್ತದೆ(ವ್ಯಾಕೋಚಿಸುತ್ತದೆ).
ವಸ್ತುವಿನ ಉಷ್ಣವನ್ನು ಕಡಿಮೆ ಮಾಡಿದಾಗ ವಸ್ತು ಕುಗ್ಗುತ್ತದೆ( ಸಂಕೋಚಿಸುತ್ತದೆ).
ಒಂದು ವಸ್ತುವಿನ ಉಷ್ಣವನ್ನು ಹೆಚ್ಚು ಮಾಡಿದಾಗ ಅದರ ತಾಪ(temperature)ವೂ ಹೆಚ್ಚಾಗುತ್ತದೆ.
ಒಂದು ವಸ್ತುವಿನ ಅಣುಗಳ ಸರಾಸರಿ ಚಲನಶಕ್ತಿಗೆ ತಾಪ ಎನ್ನುತ್ತೇವೆ.
ಉಷ್ಣ ದಿಂದ ವಸ್ತುಗಳ ಸ್ಥಿತಿ ಬದಲಾವಣೆಯಾಗುತ್ತದೆ.
ನಿತ್ಯ ಜೀವನದಲ್ಲಿ ಉಷ್ಣದ ಪರಿಣಾಮಗಳ ಅನ್ವಯ;
ಎತ್ತಿನ ಗಾಡಿಯ ಮರದ ಚಕ್ರಕ್ಕೆ ಉಕ್ಕಿನ ಪಟ್ಟಿ ಕೂರಿಸಲು ಉಷ್ಣದ ಪರಿಣಾಮವನ್ನು ಅಳವಡಿಸುತ್ತೇವೆ;ಮೊದಲು ಮರದ ಚಕ್ರವನ್ನು ತಯಾರಿಸಲಾಗುತ್ತದೆ.ನಂತರ ಮರದ ಚಕ್ರಕ್ಕಿಂತ ಸ್ವಲ್ಪ ಕಿರಿದಾದ ಉಕ್ಕಿನ ವೃತ್ತಾಕಾರದ ಪಟ್ಟಿಯನ್ನು ತಯಾರಿಸಲಾಗುತ್ತದೆ.ಉಕ್ಕಿನ ಪಟ್ಟಿಯನ್ನು ಚೆನ್ನಾಗಿ ಕಾಯಿಸಲಾಗುತ್ತದೆ.ಕಾಯಿಸಿದಾಗ ಉಕ್ಕಿನ ಪಟ್ಟಿಯ ಪರಿಧಿಯು ಮರದ ಚಕ್ರಕ್ಕಿಂತ ದೊಡ್ಡದಾಗುತ್ತದೆ.ಈಗ ಉಕ್ಕಿನ ಪಟ್ಟಿಯೊಳಗೆ ಮರದ ಚಕ್ರವನ್ನು ಜಾರಿಸಿ ತಕ್ಷಣ ತಂಪು ಮಾಡಲಾಗುತ್ತದೆ. ತಂಪು ಮಾಡಿದಾಗ ಉಕ್ಕಿನ ಪಟ್ಟಿಯು ಕುಗ್ಗಿ, ಮರದ ಚಕ್ರವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.
ಬಿಗಿಯಾಗಿರುವ ಬಾಟಲಿಯ ಬಿರಡೆಯನ್ನು ಕಳಚಲು ಅದನ್ನು ಲಘುವಾಗಿ ಕಾಯಿಸಿ ಕಳಚಿದರೆ ಸುಲಭವಾಗಿ ಕಳೆದುಕೊಳ್ಳುತ್ತದೆ.ಇಲ್ಲಿ ಕಾಯಿಸಿದಾಗ ಬಾಟಲಿಯ ಬಿರಡಿ ಯು ಹಿಗ್ಗುತ್ತದೆ.
ಹಡಗಿನ ನಿರ್ಮಾಣದಲ್ಲಿ ರಿವೆಟ್ ಜೋಡಣೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.
ತಾಪಮಾಪಕಗಳ ತಯಾರಿಕೆಯಲ್ಲಿ ಉಷ್ಣದ ಪರಿಣಾಮವನ್ನು ಅನ್ವಯಿಸುತ್ತೇವೆ.
ಉಷ್ಣದ ಏಕಮಾನಗಳು;
ಉಷ್ಣದ ಅಂತರಾಷ್ಟ್ರೀಯ ಏಕಮಾನ ಜೂಲ್(joule) ಆಗಿದೆ.
ಕ್ಯಾಲರಿ ಯು ಉಷ್ಣದ ಇನ್ನೊಂದು ಏಕಮಾನ .ಒಂದು ಕ್ಯಾಲರಿ ಯೂ 4.2J ಗಳಿಗೆ ಸಮವಾಗಿದೆ.
ಕಿಲೋ ಜೂಲ್ ಮತ್ತು ಕಿಲೋ ಕ್ಯಾಲರಿಗಳು ಕೂಡ ಉಷ್ಣದ ಏಕಮಾನಗಳಾಗಿವೆ.ಕಿಲೋ ಎಂದರೆ ಸಾವಿರ ಎಂದರ್ಥ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3
ಕಲಿಕಾ ಫಲ 3 ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು. ಕಲಿಕಾ ...
-
ಭಾಜ್ಯತೆಯ ನಿಯಮಗಳೆಂದರೆ ನೈಜ ಭಾಗಾಕಾರ ಮಾಡ್ದೇನೆ ದತ್ತ ಸಂಖ್ಯೆಯು ಯಾವ ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆ ಎಂಬುದನ್ನು ಕಂಡು ಹಿಡಿಯಲು ನಮಗಿರುವ ಸೂಚನೆಗಳೇ ಭಾಜ್ಯತೆಯ ...
-
ದಾತುವಿನ ಸಂಯೋಗ ಸಾಮರ್ಥ್ಯ ಎಂದರೇನು ? ಧಾತುವಿನ ಪರಮಾಣುವಿನ ಬಂಧ ಸಾಮರ್ಥ್ಯವನ್ನು ಸಂಯೋಗ ಸಾಮರ್ಥ್ಯ ಎನ್ನುತ್ತೇವೆ; ಧಾತುವಿನ ಪರಮಾಣು ತನ್ನ ಇಂತಿಷ್ಟೇ ಎಲೆಕ್ಟ್ರಾನುಗಳ...
-
ಕಲಿಕಾ ಫಲ 3 ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು. ಕಲಿಕಾ ...
Super
ಪ್ರತ್ಯುತ್ತರಅಳಿಸಿ