ಪರಿಕಲ್ಪನೆಗಳನ್ನು ಮೈಂಡ್ ಮ್ಯಾಪ್ (ಪರಿಕಲ್ಪನಾ ನಕ್ಷೆ) ಬಳಸಿಕೊಂಡು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.8ನೇ ತರಗತಿ ವಿಜ್ಞಾನ ಕಲಿಕಾ ಚೇತರಿಕೆ.
ಶನಿವಾರ, ಫೆಬ್ರವರಿ 5, 2022
ವಿಸರ್ಜನೆ
ಜೀವಿಗಳು ನಿರುಪಯುಕ್ತ ವಸ್ತುಗಳನ್ನು ತಮ್ಮ ದೇಹದಿಂದ ಹೊರ ಹಾಕುವುದಕ್ಕೆ ವಿಸರ್ಜನೆ ಎನ್ನುತ್ತೇವೆ.ಜೀವಿಗಳು ಹೀಗೆ ಮಾಡದಿದ್ದಲ್ಲಿ ನಿರುಪಯುಕ್ತ ವಸ್ತುಗಳು ದೇಹದಲ್ಲಿ ಉಳಿದು ವಿಷವಾಗುತ್ತದೆ.
ಸಸ್ಯಗಳಲ್ಲಿ ವಿಸರ್ಜನೆ; ಸಸ್ಯಗಳು ಕಾರ್ಬನ್ ಡೈಯಾಕ್ಸೈಡ್ ಸಸಾರಜನಕ ಟೆನಿನ್ ಆಲ್ಕಲಾಯ್ಡ್ ಮುಂತಾದ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಈ ನಿರುಪಯುಕ್ತ ವಸ್ತುಗಳು ಎಲೆ ತೊಗಟೆ ಹೂವಿನ ದಳಗಳಲ್ಲಿ ಶೇಖರವಾಗುತ್ತದೆ.ಎಲೆಗಳು,ತೊಗಟೆ, ಹೂವಿನ ದಳಗಳು ಉದುರಿದಾಗ ವಿಸರ್ಜನೆಯಾಗುತ್ತದೆ.
ಪ್ರಾಣಿಗಳಲ್ಲಿ ವಿಸರ್ಜನೆ;
ಅಮೀಬಾ , ಹೈಡ್ರಾ ಮುಂತಾದ ಸರಳ ಜೀವಿ ಗಳಲ್ಲಿ ವಿವರಣೆಯ ಮೂಲಕ ವಿಸರ್ಜನೆಯಾಗುತ್ತದೆ.ವಿಸರಣೆ ಎಂದರೆ ವಸ್ತುಗಳು ಹೆಚ್ಚು ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಚಲಿಸುವುದು.
ಈಗ ಕೆಲ ಬಹುಕೋಶಿಯ ಜೀವಿಗಳಲ್ಲಿ ವಿಸರ್ಜನೆ ಹೇಗೆ ನಡೆಯುತ್ತದೆ ಎಂಬುದನ್ನು ಗಮನಿಸೋಣ.
ಪ್ಲನೇರಿಯಾ ಎಂಬ ಸಿಹಿನೀರಿನಲ್ಲಿ ವಾಸಿಸುವ ಚಪ್ಪಟೆ ಹುಳುವಿನಲ್ಲಿ ಜ್ವಾಲಾ ಕೋಶಗಳು (flame cells) ಪ್ರತ್ಯೇಕ ಕೋಶಗಳಿದ್ದು ಅವು ಕಿಡ್ನಿ ಯಂತೆ ಕಾರ್ಯನಿರ್ವಹಿಸಿ ನಿರುಪಯುಕ್ತ ವಸ್ತುಗಳನ್ನು ಹೊರಹಾಕುತ್ತವೆ.ಇದೇ ರೀತಿ ಎರೆಹುಳು ವಿನಲ್ಲಿ ನೆಫ್ರೀಡಿಯ(nephridia) ಮತ್ತು ಕೀಟಗಳಲ್ಲಿ ಮಾಲ್ಫಿಜಿಯನ್ ನಾಳಗಳು (Malpighian tubules) ಕಶೇರುಕಗಳ ಕಿಡ್ನಿಯಂತೆ ಕೆಲಸ ಮಾಡುವ ವಿಸರ್ಜನಾಂಗ ಗಳಾಗಿವೆ.
ಮಾನವನಲ್ಲಿ ವಿಸರ್ಜನೆ;
ಮಾನವನಲ್ಲಿ ಶ್ವಾಸಕೋಶಗಳು, ಮೂತ್ರಜನಕಾಂಗಗಳು ಮತ್ತು ಚರ್ಮ ವಿಸರ್ಜನಾಂಗಗಳಾಗಿವೆ.
ಶ್ವಾಸಕೋಶವೂ ಕಾರ್ಬನ್ ಡೈಆಕ್ಸೈಡ್, ನೀರು ಗಳನ್ನು ಹೊರಹಾಕುತ್ತದೆ.
ಮೂತ್ರಜನಕಾಂಗವು ಯೂರಿಯಾ,ಯೂರಿಕ್ ಆಮ್ಲ, ಲವಣಗಳು, ನೀರು ಗಳನ್ನು ವಿಸರ್ಜಿಸುತ್ತದೆ.
ಚರ್ಮವು ಯೂರಿಯಾ ಲವಣಗಳು ನೀರು ಗಳನ್ನು ವಿಸರ್ಜಿಸುತ್ತದೆ.
ಮೂತ್ರಜನಕಾಂಗಗಳು ನೆಫ್ರಾನ್ ಗಳು ಎಂಬ ವಿಶಿಷ್ಟ ಕೋಶಗಳಿಂದ ಮಾಡಲ್ಪಟ್ಟಿದೆ.ನೆಪ್ರಾನ್ ಗಳು ರಕ್ತದಿಂದ ನಿರುಪಯುಕ್ತ ವಸ್ತುಗಳನ್ನು ಬೇರ್ಪಡಿಸುತ್ತವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
8ನೇ ತರಗತಿ ವಿಜ್ಞಾನ|| ಕಲಿಕಾ ಚೇತರಿಕೆ || ಲೋಹಗಳು ಮತ್ತು ಅಲೋಹಗಳು || ಕಲಿಕಾ ಫಲಗಳು 3
ಕಲಿಕಾ ಫಲ 3 ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವರು ಹಾಗೂ ಆಮ್ಲ ಪ್ರತ್ಯಾಮ್ಲಗಳಲ್ಲಿರುವ ಲೋಹ ಮತ್ತು ಅಲೋಹಗಳನ್ನು ಗುರುತಿಸುವರು. ಕಲಿಕಾ ...
-
ಭಾಜ್ಯತೆಯ ನಿಯಮಗಳೆಂದರೆ ನೈಜ ಭಾಗಾಕಾರ ಮಾಡ್ದೇನೆ ದತ್ತ ಸಂಖ್ಯೆಯು ಯಾವ ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆ ಎಂಬುದನ್ನು ಕಂಡು ಹಿಡಿಯಲು ನಮಗಿರುವ ಸೂಚನೆಗಳೇ ಭಾಜ್ಯತೆಯ ...
-
ದಾತುವಿನ ಸಂಯೋಗ ಸಾಮರ್ಥ್ಯ ಎಂದರೇನು ? ಧಾತುವಿನ ಪರಮಾಣುವಿನ ಬಂಧ ಸಾಮರ್ಥ್ಯವನ್ನು ಸಂಯೋಗ ಸಾಮರ್ಥ್ಯ ಎನ್ನುತ್ತೇವೆ; ಧಾತುವಿನ ಪರಮಾಣು ತನ್ನ ಇಂತಿಷ್ಟೇ ಎಲೆಕ್ಟ್ರಾನುಗಳ...
-
ಕಾಂತ ಎಂದರೇನು ? ತಮ್ಮ ಸುತ್ತಲೂ ಅಗೋಚರ ಬಲದ ಕ್ಷೇತ್ರವನ್ನು ಉಂಟು ಮಾಡಿಕೊಳ್ಳುವ ಕಲ್ಲುಗಳು ಮತ್ತು ಕೆಲವು ಲೋಹಗಳನ್ನು ಕಾಂತ ಎನ್ನುತ್ತೇವೆ.ಈ ಬಲವು ಇ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ