ಜೀವಿ ಜೀವಂತವಾಗಿರಲು ನಡೆಸುವ ಮೂಲ ಕ್ರಿಯೆಗಳನ್ನು ಜೀವಕ್ರಿಯೆಗಳು ಎನ್ನುತ್ತೇವೆ.
ಜೀವಿ ಸೇವಿಸಿದ ಆಹಾರವನ್ನು ಜೀರ್ಣಿಸಿ ದೇಹಗತ ಮಾಡಿಕೊಳ್ಳುವುದಕ್ಕೆ ಪೋಷಣೆ ಎನ್ನುತ್ತೇವೆ.
ಪೋಷಣೆಯ ಆಧಾರದ ಮೇಲೆ ಜೀವಿಗಳನ್ನು ಎರಡು ಬಗೆಗಳಾಗಿ ವಿಂಗಡನೆ ಮಾಡಬಹುದು, ಅವುಗಳೆಂದರೆ ಸ್ವಪೋಷಕಗಳು ಮತ್ತು ಪರಪೋಷಕಗಳು.
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಜೀವಿಗಳನ್ನು ಸ್ವಪೋಷಕಗಳು ಎನ್ನುತ್ತೇವೆ.
ಉದಾಹರಣೆಗೆ ಎಲ್ಲಾ ಹಸಿರು ಸಸ್ಯಗಳು.
ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುವ ಜೀವಿಗಳನ್ನು ಪರಪೋಷಕಗಳು
ಎನ್ನುತ್ತೇವೆ.ಉದಾಹರಣೆಗೆ ಪ್ರಾಣಿಗಳು .ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಪ್ರತ್ಯಕ್ಷವಾಗಿ ಅಂದರೆ ನೇರವಾಗಿ ಹಸಿರು ಸಸ್ಯಗಳನ್ನು ಅವಲಂಬಿಸಿರುತ್ತವೆ.ಅಂತಹ ಪ್ರಾಣಿಗಳನ್ನು ಸಸ್ಯಹಾರಿಗಳು ಎನ್ನುತ್ತೇವೆ.ಆದರೆ ಮತ್ತೆ ಕೆಲವು ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಸಸ್ಯಹಾರಿ ಪ್ರಾಣಿಗಳನ್ನು ಅವಲಂಬಿಸಿರುತ್ತವೆ ಅಂದರೆ ಪರೋಕ್ಷವಾಗಿ ಸಸ್ಯಗಳನ್ನು ಅವಲಂಬಿಸಿರುತ್ತವೆ.ಈ ಜೀವಿಗಳನ್ನು ಮಾಂಸಹಾರಿಗಳು ಎನ್ನುತ್ತೇವೆ.
ಅಲ್ಲದೆ ಪತ್ರಹರಿತು ಇಲ್ಲದ ಕಸ್ಕ್ಯೂಟ ನಾಯಿಕೊಡೆ ಮುಂತಾದ ಸಸ್ಯಗಳು ಕೂಡ ತಮ್ಮ ಆಹಾರಕ್ಕಾಗಿ ಇತರ ಜೀವಿಗಳನ್ನು ಅವಲಂಬಿರುತ್ತವೆ. ಆದ್ದರಿಂದ ಇವುಗಳನ್ನು ಕೂಡ ಪರಪೋಷಕಗಳು ಎನ್ನುತ್ತೇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ